Home
ಸವಣೂರ ಪುರಸಭೆಯ ಬಗ್ಗೆ :
ಸ್ವತಂತ್ರ ಪೂರ್ವದಲ್ಲಿ ಸವಣೂರು ಪಟ್ಟಣವು 1872 ರಲ್ಲಿಯೇ ಅಂದಿನ ನವಾಬರಾದ ಅಬ್ದುಲ್ ಮಜೀದ್ ಖಾನ್ ದಿಲೇರ್ ಜಂಗ್ ಬಹದ್ದೂರ (CBE) ಇವರ ಕಾಲದಲ್ಲಿ ಪುರಸಭೆಯ ಸ್ತಾಪನೆಯಾಗಿರುತ್ತದೆ. ಇಂದು ಸವಣೂರು ಪಟ್ಟಣದಲ್ಲಿ ಒಟ್ಟು 23 ವಾರ್ಡುಗಳಿದ್ದು ಪ್ರತೀ ವಾರ್ಡನ್ನು ಪ್ರತಿನಿಧಿಸುವ 23 ಸದಸ್ಯರುಗಳಿರುತ್ತಾರೆ. 2001ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯ 35,563 ಇದ್ದು ಅದರಲ್ಲಿ ಒಟ್ಟು 18,333 ಪುರುಷರು ಮತ್ತು 17,230 ಸ್ತ್ರೀಯರಿರುತ್ತಾರೆ. ಅದರಲ್ಲಿ ಪರಿಶಿಷ್ಠಜಾತಿ 2,913 ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ 263 ಜನರಿರುತ್ತಾರೆ.
ಇತಿಹಾಸದ ಪುಟಗಳಲ್ಲಿ:
ಐತಿಹಾಸಿಕವಾಗಿ ಮರಾಠರು, ಬಹಮನಿ ರಾಜರು ಮತ್ತು ನವಾಬರಿಂದ ಆಳಲ್ಪಟ್ಟ ಈ ಊರಿಗೆ "ಸವಣೂರು"ಎಂದು ಹೆಸರು ಬರಲು "ಶ್ರಾವಣ" ಮಾಸದಲ್ಲಿ ನವಾಬರು ಬಂಕಾಪುರದಿಂದ ಇಲ್ಲಿಗೆ ತಮ್ಮ ಕೇಂದ್ರಸ್ಥಾನವನ್ನು ಬದಲಾಯಿಸಿದ ಕಾರಣದಿಂದ ಇರಬಹುದೆಂದು ಸವಣೂರಿನ ಬಗ್ಗೆ ಲಭ್ಯವಿರುವ ಕೆಲವು ಪುಸ್ತಕಗಳಿಂದ ತಿಳಿದುಬರುತ್ತದೆ. ನವಾಬರ ಬಂಗಲೆ, ನವಾಬರ ಮಗಳ ಬಂಗಲೆ, ಪ್ರಸಿದ್ದ ಶ್ರೀ ಸತ್ಯಭೂಧ ಮಠ, ಭಾರತದಲ್ಲಿ ವಿರಳ ದೊಡ್ಡ ಹುಣಸೇ ಮರ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿವೆ.
ವ್ಯಾಪಾರ ವಹಿವಾಟು:
ಸವಣೂರು ಪೂನಾ-ಬೆಂಗಳೂರು ರಾಷ್ಠ್ರೀಯ ಹೆದ್ದಾರಿಯಿಂದ ಕೇವಲ 10ಕಿ.ಮಿ. ಪಶ್ಚಿಮಕ್ಕಿದೆ ಮತ್ತು ರೈಲು ನಿಲ್ದಾಣದಿಂದ 8ಕಿ.ಮಿ ದೂರದಲ್ಲಿದೆ, ಇದು ಹಾವೇರಿ ಜಿಲ್ಲೆಯ ಮುಖ್ಯ ವ್ಯಾಪಾರೀ ಸ್ಥಳವಾಗಿದ್ದು, ಇಲ್ಲಿಯ ಇಲ್ಲಿ ಬೆಳೆಯಲಾಗುವ ಮತ್ತು ಮಾರಾಟ ಮಾಡಲಾಗುವ ವಿಳ್ಯದ ಎಲೆಗಳು ಜಗತ್ಪ್ರಸಿದ್ದಿಯಾಗಿದ್ದು ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಹೊರ ರಾಷ್ಟ್ರಗಳು ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ.
ಬೌಗೋಳಿಕವಾಗಿ ಸವಣೂರು 41° 51' ಅಕ್ಷಾಂಶ ಮತ್ತು 75° 05' ರೇಖಾಂಶದಲ್ಲಿದೆ.
ಸಂಪರ್ಕಕ್ಕೆ ಹತ್ತಿರದ ಸ್ಥಳಗಳು: ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ರಾಣಿಬೆನ್ನುರು, ದಾವಣಗೆರೆ.
About Savanur Town
Savanur has Municipal System Since from 1872, The Nawab Of Savanur at that time Abudl Mazidkhan Dileerjung Bahaddur have started the system in welfare of citizens, Now Savanur Town has total of 23 wards and 23 members representing each ward. As per 2001 Population Survey, Total Population is 35,563 (18,333 male and 17,230 female), among them 2,913 Peoples belongs to S.C. & 263 Peoples belongs to S.T.
History of Savanur:
This town was ruled by Marathas and Bahamani Kings. It is famous for historical town. Nawab of Savanur transferred his Head-Quarter from Bankapur to Savanur in the month of "SHRAVANA" by this reason this town named as "SAVANUR. Bungalow of Nawab, Nawab's daughters bungalow, famous Sri Sathybodha math, rare "Dodda Hunse Mara" are in this town.
Commercial Activity:
Savanur is situated 10km away to west of Poona-Bangalore National Highway. The Savanur town is 8km away from east of Savanur Railway Station. Savanur is commercially important town in Haveri District, World famous Betel leaves are produced and marketed on a larger scale and the leaves exported to foreign countries and outside states.
Savanur town geographically 41° 51' North Latitude and 75° 05' East Longitude.
Nearest places for Communication are- Hubli, Dharwad, Gadag, Haveri, Ranebennur, Davangere.
ನಮ್ಮ ಧ್ಯೇಯೋದ್ದೇಶಗಳು:
ಸಾರ್ವಜನಿಕರ ಮೂಲಭೂತ ಅವಶ್ಯಕತೆಗಳಾದ ಶುದ್ದ ಕುಡಿಯುವ ನೀರು ಸ್ವಚ್ಚ ಪರಿಸರ ಹಾಗೂ ಸವಣೂರಿನ ಸಾರ್ವಜನಿಕರ ಅವಶ್ಯಕತೆಗೆ ಅನುಗುಣವಾಗಿ ರಸ್ತೆ, ಗಟಾರ ಮತ್ತು ಹೊಸ ಬಡಾವಣೆಗಳನ್ನು ನಿರ್ಮಿಸಿ ಜನರ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವದು ಮತ್ತು ಘನ ಸರ್ಕಾರದ ಹತ್ತು ಹಲವು ಯೋಜನೆಗಳನ್ನು ಸಮರ್ಪಕವಾಗಿ ಜನ ಸಾಮಾನ್ಯರಿಗೆ ತಲುಪಿಸುವದು ನಮ್ಮ ಪುರಸಭೆಯ ಧ್ಯೇಯೋದ್ದೇಶವಾಗಿದ್ದು. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಸೇರಿ ಸಾರ್ವಜನಿಕರಿಗಾಗಿ ಈ ಕೆಳಕಾಣಿಸಿದ ಪ್ರಮುಖ ಧ್ಯೇಯೋದ್ದೇಆಶಗಳನ್ನು ಹೊಂದಿದ್ದೇವೆ.
- ನೈರ್ಮಲ್ಯ ಮತ್ತು ಆರೋಗ್ಯ ಕಾಪಾಡುವದು.
- ಅಪಾಯಕಾರಿ ರೋಗಗಳ ನಿಯಂತ್ರಣ.
- ತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿ ಮತ್ತು ನಿರ್ವಹಣೆ.
- ಬೀದಿ ದೀಪಗಳ ನಿರ್ವಹಣೆ.
- ಸಾರ್ವಜನಿಕ ಶೌಚಾಲಯಗಳಂತ ಮೂಲ ಸೌಕರ್ಯಗಳನ್ನು ಒದಗಿಸುವುದು.
- ಕಸಾಯಿಖಾನೆಗಳ ನಿರ್ಮಾಣ, ನಿರ್ವಹಣೆ ಮತ್ತು ನಿಯಂತ್ರಣ.
- ಜನನ, ಮರಣ ಮತ್ತು ನಿರ್ಜೀವ-ಜನನದ ನೊಂದಣಿ
- ಮನೆ ಬಳಕೆ, ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ನೀರು ಸರಬರಾಜು ಮಾಡುವುದು.
- ಸರಕಾರದ ವಿವಿಧ ಯೋಜನೆಗಳನ್ನು ಅನುಞ್ಠಾನ ಗೊಳಿಸುವದು.
- ಸವಣೂರಿನ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು.
- ಸರಕಾರದ ವಿವಿಧ ಅನುದಾನಗಳ ಸದುಪಯೋಗವನ್ನು ಸಾರ್ವಜನಿಕರಿಗೆ ಒದಗಿಸುವದು.
- ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆ.
- ಸರ್ಕಾರದ ನಿಯಮಾವಳಿಗೀಗೊಳಪಟ್ಟು ಸ್ಥಳೀಯವಾಗಿ ತೆರಿಗೆ ವಿಧಿಸುವದು, ಸಂಗ್ರಹಿಸಿದ ತೆರಿಗೆಯನ್ನು ಸಾರ್ವಜನಿಕ ಉಪಯೋಗಕ್ಕೆ ತೊಡಗಿಸುವದು.
- ಭೂಮಿಯ ಉಪಯೋಗವನ್ನು ನಿಯಂತ್ರಿಸುವುದು.
- ಸ್ಮಶಾನ ಮತ್ತು ಸ್ಮಶಾನ ಭೂಮಿ, ಅಂತ್ಯ ಸಂಸ್ಕಾರ, ಸುಡುವಿಕೆಗೆ ಭೂಮಿ ಮತ್ತು ವಿದ್ಯುತ್ ಚಿತಾಗಾರ ಸೌಕರ್ಯಗಳನ್ನು ಒದಗಿಸುವುದು.
- ಕೊಳಚೆ ಪ್ರದೇಶಗಳ ಅಭಿವೃದ್ಧಿ ಹಾಗೂ ನಗರದ ಬಡತನ ನಿವಾರಣೆ.
- ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುವುದು.
- ಸಮಾಜದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದು.
- ಸಾರ್ವಜನಿಕರಿಗೆ ತುರ್ತು ಸೇವೆಗಳನ್ನು ಒದಗಿಸಲು ಮಾನ್ಯ ಪೌರ ಸುಧಾರಣಾ ಕೋಶದ ಸಹಯೋಗದಲ್ಲಿ ವಿವಿಧ ಗಣಕೀಕರಣ ಯೋಜನೆಗಳನ್ನು ಅನಿಷ್ಠಾನಗೊಳಿಸುವದು.
ಸುದ್ದಿಯಲ್ಲಿ News:
ಚುನಾವಣೆ
ಸವಣೂರ ಪುರಸಸಭೆಯ ನೂತನ ಅದ್ಯಕ್ಷ ಸ್ಥಾನಕ್ಕೆ, ದಿನಾಂಕ: 06/01/2012ರಂದು ಮದ್ಯಾಹ್ನ 12:10 ಕ್ಕೆ ಸವಣೂರ ಪುರಸಭೆಯ ಸಭಾ ಭವನದಲ್ಲಿ ಜರುಗಿದ ಚುನಾವಣೆಯಲ್ಲಿ ಶ್ರೀಮತಿ ಲಕ್ಷ್ಮವ್ವ.ಎಸ್. ಕಲಘಟಗಿ ಇವರು ಪುರಸಭೆಯ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಯೋಜನೆಗಳು
ಗಣಕೀಕರಣ ಯೋಜನೆಗಳು:
1. ಫುರಸಭೆಯ ವೆಬ್‌ವೈಟ್
ಪೌರ ಸುಧಾರಣಾ ಕೋಶದ ಸಹಯೋಗದೊಂದಿಗೆ ಅವಣೂರ ಪುರಸಭೆಯ ವೆಬ್ಸೈಟ್‌ನ್ನು ನಿರ್ವಹಿಸಲಾಗುತ್ತಿದ್ದು, http://savanurtown.gov.in/ ಇಲ್ಲಿ ಸವಣೂರ ಪುರಸಭೆಯ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಬಿಂಬಿಸುವ ಸದುದ್ದೇಶದಿಂದ ಪ್ರಮುಖವಾಗಿ ಸಿಬ್ಬಂದಿ ಮಾಹಿತಿ, ಕೌನ್ಸಿಲ್ ಮಾಹಿತಿ, ಚುನಾಯಿತ ಪ್ರತಿನಿಧಿಗಳ ಮಾಹಿತಿ, ಟೆಂಡರ್ ಮಾಹಿತಿ, ಸಾರ್ವಜನಿಕ ಪ್ರಕಟಣೆ ಕಾಯ್ದೆ, ಮಾಹಿತಿ ಹಕ್ಕು, ಘನತ್ಯಾಜ್ಯ ವಸ್ತು ವಿಲೇವಾರಿ, ಮಳೆ ನೀರು ಕೊಯ್ಲು ಪದ್ಧತಿ, ಪಟ್ಟಣದ ರಸ್ತೆ, ಬೀದಿ ದೀಪ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿ ಅಂಶಗಳು, ಪಟ್ಟಣದ ಹಣಕಾಸು ಪದ್ಧತಿ ವಿವರ, ಆಯ ವ್ಯಯ, ಸಭಾನಡವಳಿಗಳು ಇನ್ನು ಹತ್ತು ಹಲವು ಉಪಯುಕ್ತ ಮಾಹಿತಿ ಈ ವೆಬ್ ತಾಣದಲ್ಲಿ ಲಭ್ಯವಿರುತ್ತದೆ. ಇದಲ್ಲದೇ ಪೌರಸುಧಾರಣಾ ಕೋಶದಿಂದ ಅಭಿವೃದ್ದಿಪಡಿಸಲಾದ ಎಲ್ಲಾ ಅಪ್ಲಿಕೇಶನ್‌ಗಳನ್ನು ನಮ್ಮ ಈ ವೆಬ್‌ಸೈಟ್‌ನಿಂದ ಪ್ರವೇಶಿಸಬಹುದಾಗಿದೆ.
2. ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ .
ಜನನ/ ಮರಣ ಹಾಗೂ ನಿರ್ಜಿವ ಜನನಗಳ ನೋಂದಣಿ ಕಡ್ಡಾಯ
-
ಘಟನೆ ಸಂಭವಿಸಿದ 21 ದಿನಗಳೂಳಗಾಗಿ ನಿಮ್ಮ ನಗರಸಭೆ ಕಾರ್ಯಾಲಯದಲ್ಲಿ ನೋಂದಾಯಿಸಿ ಉಚಿತ ಪ್ರಮಾಣಪತ್ರ ಪಡೆಯಿರಿ.
-
ಇ-ಗೌರ್ನಮೆಂಟ್ ಸಹಕಾರದೊಂದಿಗೆ ಸವಣೂರ ಪುರಸಭೆಯ ಜನನ/ ಮರಣ ಹಾಗೂ ನಿರ್ಜಿವ ಜನನಗಳ ನೋಂದಣಿ ಪ್ರಕ್ರಿಯೆಯು ಗಣಕೀಕರಣಗೊಂಡಿದ್ದು ಕಾರಣ ನಗರದ ಸಾರ್ವಜನಿಕರು ಇದರ ಸದುಪಯೂಗ ಪಡೆದುಕೊಳ್ಳಲು ಕೊರಲಾಗಿದೆ.
ಜನನ/ಮರಣ ಹಾಗೂ ನಿರ್ಜಿವ ಜನನಗಳ ಧಾಖಲಾತಿ ಹುಡುಕಲು ಇಲ್ಲಿ ಕ್ಲಿಕ್ ಮಾಡಿ(ಜನೆವರಿ 1996 ರ ನಂತರ ಮಾತ್ರ)
3. ಸಾರ್ವಜನಿಕ ದೂರು ನಿರ್ವಹಣೆ:
-
ಸವಣೂರ ಪುರಸಭೆ ವ್ಯಾಪ್ತಿಯ ಯಾವದೇ ದೂರುಗಳನ್ನು ಇಲ್ಲಿ ನೋಂದಾಯಿಸಬಹುದಾಗಿದೆ.
-
ದೂರಿನ ಪ್ರಾಮುಖ್ಯತೆಗನುಸಾರವಾಗಿ ನಮ್ಮ ಸಿಬ್ಬಂದಿಯು ನಿಮ್ಮ ದೂರುಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ.
ನಿಮ್ಮ ದೂರನ್ನು ಧಾಖಲಿಸಲು ಇಲ್ಲಿ ಕ್ಲಿಕ್ ಮಾಡಿ.
ದೂರು ಧಾಖಲಿಸಲು ಸಹಾಯ ಬೇಕಾದಲ್ಲಿ ಇಲ್ಲಿ ಕ್ಲಿಕ್ ಮಾಡಿ
4. ನಿಧಿ ಆಧಾರಿತ ಲೆಕ್ಕ ಪದ್ದತಿ:
ಕಛೇರಿಯಲ್ಲಿ ನಿಧಿ ಆಧಾರಿತ ದ್ವಿನಮೂದು ಸಂಚಯನ ಲೆಕ್ಕ ಪದ್ಧತಿಯನ್ನು ಈಗಾಗಲೇ ಗಣಕೀಕರಣಗೊಳಿಸಲಾಗಿದ್ದು ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ನಗರ ಸ್ಥಳೀಯ ಸಂಸ್ಥೆಯ ಎಲ್ಲಾ ಯೋಜನೆಗಳ ಆರ್ಥಿಕ ಅಂಕಿ ಅಂಶಗಳನ್ನು ಕಛೇರಿಯ ಲೆಕ್ಕಿಗರು ದಿನಂಪ್ರತಿ ಅಪ್‌ಡೇಟ್ ಮಾಡುತ್ತಿದ್ದು ಕಛೇರಿಯ ಆಯ-ವ್ಯಯದ ಸಮರ್ಪಕ ನಿರ್ವಹಣೆಗೆ ಸಹಕಾರಿಯಾಗಿದೆ. ಈ ಆನ್‌ಲೈನ್ ಅಪ್ಲಿಕೇಷನ್ ಮುಖಾಂತರ ವಾರ್ಷಿಕ ಕಾರ್ಯ ನಿರ್ವಹಣಾ ವರದಿಯನ್ನೂ ಸಹ ಪಡೆಯಬಹುದಾಗಿದ್ದು ಕಛೇರಿಯ ಎಲ್ಲಾ ಆರ್ಥಿಕ ಚಟುವಟಿಕೆಗಳ ವಿವರ ಕಛೇರಿ ವೆಬ್‌ಸೈಟ್ ಮೂಲಕ ಅಂತರ್ಜಾಲದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ.
5. ಭೌಗೋಳಿಕ ಆಸ್ತಿ ತೆರಿಗೆ ಪದ್ದತಿ
ಪೌರ ಸುಧಾರಣಾ ಯೋಜನೆಯಡಿ ಭೌಗೋಳಿಕ ಆಸ್ತಿ ತೆರಿಗೆ ಪದ್ಧತಿ ಅನುಷ್ಟಾನ ಅತೀ ಪ್ರಮುಖ ಯೋಜನೆಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪುರಸಭೆಯ ಎಲ್ಲ ಆಸ್ತಿಗಳನ್ನು 40 ಬ್ಲಾಕ್‌ಗಳಲ್ಲಿ ವಿಂಗಡಿಸಿ ಎಲ್ಲಾ ಆಸ್ತಿಗಳ ಸರ್ವೆಕಾರ್ಯ ಪೂರ್ಣಗಳಿಸಿ, ಆಸ್ತಿಗಳ ವಿವರ (ನಮೂನೆ "ಸಿ") ಡಾಟಾ ಎಂಟ್ರಿ ಮಾಡಿಸಿ ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದ್ದು ಶೀಘ್ರದಲ್ಲಿಯೇ ಪೌರ ಸುಧಾರಣಾ ಕೋಶದಿಂದ ಆನ್‌ಲೈನ್ ಮಾಡಲಾಗುವುದು.ಇದರಿಂದ ಪಟ್ಟಣದ ಆಸ್ತಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದ್ದು, ಆಸ್ತಿ ತೆರಿಗೆ ವಿವರ ಗಳನ್ನು ಸಹ ಸಾರ್ವಜನಿಕರು ಆನ್‌ಲೈನ್ ಮೂಲಕ ಪಡೆಯಬಹುದಾಗಿರುತ್ತದೆ ಹಾಗೂ ಆನ್ ಲೈನ್ ಮೂಲಕ ತೆರಿಗೆ ಆಸ್ತಿತೆರಿಗೆ ಪಾವತಿಸಬಹುದಾಗಿದ್ದು ಪಟ್ಟಣದ ನಾಗರೀಕರು ಶೀಘ್ರದಲ್ಲಿಯೇ ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.
|Last Updated : 17/03/2012|

